ಸೂಸನ್ ಬಾಸ್ನೆಟ್
ಸೂಸನ್ ಎಡ್ನಾ ಬಾಸ್ನೆಟ್, FRSL (ಜನನ ೨೧ ಅಕ್ಟೋಬರ್ ೧೯೪೫) ವಿಶ್ವವಿಖ್ಯಾತ ಅನುವಾದ ಶಾಸ್ತ್ರಜ್ಞೆ ಮತ್ತು ತೌಲನಿಕ ಸಾಹಿತ್ಯದ ವಿದ್ವಾಂಸೆ. ವಾರ್ವಿಕ್ ವಿಶ್ವವಿದ್ಯಾಯದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಪ್ರೊ-ವೈಸ್‌ಚಾನ್ಸಲರ್ ಆಗಿ ಸೇವೆ ಸಲ್ಲಿಸಿದ್ದ ಬಾಸ್ನೆಟ್, ಅದೇ ವಿಶ್ವವಿದ್ಯಾಲಯದ ಅನುವಾದ ಮತ್ತು ತೌಲನಿಕ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ಬೋಧಿಸಿದರು. ಆ ಕೇಂದ್ರವು ೨೦೦೯ರಲ್ಲಿ ಮುಚ್ಚಲ್ಪಟ್ಟಾಗ, ಮುಂದೆ ಅವರು ವಾರ್ವಿಕ್ ಮತ್ತು ಗ್ಲಾಸ್ಗೋವ್ ವಿಶ್ವವಿದ್ಯಾಲಯಗಳಲ್ಲಿ ತೌಲನಿಕ ಸಾಹಿತ್ಯದ ಪ್ರಾಧ್ಯಾಪಕಿಯಾಗಿ ಸೇರಿಕೊಂಡರು.[೧] ತಮ್ಮ ವಿದ್ಯಾಭ್ಯಾಸವನ್ನು ಬಹುತೇಕವಾಗಿ ಐರೋಪ್ಯ ದೇಶಗಳಲ್ಲಿ ಮುಗಿಸಿದರೂ, ವೃತ್ತಿಜೀವನವನ್ನು ಮಾತ್ರ ಇಟಲಿಯಲ್ಲಿ ಆರಂಭಿಸಿದರು. ಮುಂದೆ ಅಮೆರಿಕಾದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನೀಡಿ ಪ್ರಸಿದ್ಧರಾದರು.[೨] ೨೦೦೭ರಲ್ಲಿ, ರಾಯಲ್ ಸೊಸೈಟಿ ಆಫ್ ಲಿಟರೇಚರ್‌ನ ಫೆಲೋ ಆಗಿ ಅವರು ಆಯ್ಕೆಯಾದರು.[೩]
ಆರಂಭಿಕ ಜೀವನ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ಸೂಸನ್ ಬಾಸ್ನೆಟ್ ೨೧ ಅಕ್ಟೋಬರ್ ೧೯೪೫ ರಂದು ಜನಿಸಿದರು. ೧೯೬೮ರಲ್ಲಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಮತ್ತು ಇಟಾಲಿಯನ್ ವಿಷಯಗಳಲ್ಲಿ ಪ್ರಥಮ ದರ್ಜೆಯೊಂದಿಗೆ ಬಿಎ (ಆನರ್ಸ್) ಪದವಿಯನ್ನು ಪಡೆದರು. ಆ ಬಳಿಕ ೧೯೭೫ರಲ್ಲಿ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಿಂದ ಫ್ರೆಂಚ್‌ನಲ್ಲಿ ಪಿಎಚ್.ಡಿ ಪದವಿಯನ್ನು ಪೂರ್ಣಗೊಳಿಸಿದರು.[೪]
ವೃತ್ತಿ ಜೀವನ
[ಬದಲಾಯಿಸಿ]ಬಾಸ್ನೆಟ್ ೧೯೬೮ರಿಂದ ೧೯೭೨ರವರೆಗೆ ರೋಮ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಆನಂತರ ಮಾತೃಭೂಮಿಯಾಗಿದ್ದ ಇಂಗ್ಲೆಂಡ್‌ಗೆ ಹಿಂದಿರುಗಿ ೧೯೭೨ರಿಂದ ೧೯೭೬ರವರೆಗೆ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿ ವೃತ್ತಿಯನ್ನು ಮುಂದುವರೆಸಿದರು. ಮುಂದೆ ೧೯೭೬ರಲ್ಲಿ ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಸೇರಿ, ೧೯೮೫ರಲ್ಲಿ ಅನುವಾದ ಮತ್ತು ತೌಲನಿಕ ಸಾಂಸ್ಕೃತಿಕ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದರು. ೧೯೮೯ರಲ್ಲಿ ರೀಡರ್ ಆಗಿ ಬಡ್ತಿಯನ್ನು ಪಡೆದು, ೧೯೯೨ರಲ್ಲಿ ತೌಲನಿಕ ಸಾಹಿತ್ಯದ ಪ್ರಾಧ್ಯಾಪಕಿಯಾಗಿ ನೇಮಕಗೊಂಡರು. ೧೯೯೭ರಿಂದ ೨೦೦೩ರವರೆಗೆ ಹಾಗೂ ೨೦೦೫ರಿಂದ ೨೦೦೯ರವರೆಗೆ ಎರಡು ಬಾರಿ ಅವರು ವಿಶ್ವವಿದ್ಯಾಲಯದ ಪ್ರೊ-ವೈಸ್‌ಚಾನ್ಸಲರ್ ಆಗಿ ಸೇವೆ ಸಲ್ಲಿಸಿದರು. ೨೦೧೬ರಲ್ಲಿ ವಾರ್ವಿಕ್‌ನಿಂದ ನಿವೃತ್ತರಾದರೂ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ನಿವೃತ್ತಿಯ ಬಳಿಕ, ಅವರು ಗ್ಲಾಸ್ಗೋವ್ ವಿಶ್ವವಿದ್ಯಾಲಯದಲ್ಲಿ ತೌಲನಿಕ ಸಾಹಿತ್ಯದ ಪ್ರಾಧ್ಯಾಪಕಿಯಾಗಿ ನೇಮಕಗೊಂಡರು.[೪]
ಗಮನಾರ್ಹ ಕೃತಿಗಳು
[ಬದಲಾಯಿಸಿ]ಬಾಸ್ನೆಟ್ ರಚಿಸಿದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳ ಪೈಕಿ, ಹಲವಾರು ಕೃತಿಗಳು, ಅದರಲ್ಲೂ ಟ್ರಾನ್ಸ್ಲೇಷನ್ ಸ್ಟಡೀಸ್ (೧೯೮೦) ಮತ್ತು ಕಂಪಾರಿಟಿವ್ ಲಿಟರೇಚರ್: ಎ ಕ್ರಿಟಿಕಲ್ ಇಂಟ್ರಡಕ್ಷನ್ (೧೯೯೩) ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. ಇಂಗ್ಲಿಷ್ ಕವಿ ಟೆಡ್ ಹ್ಯೂಸ್ ಬಗ್ಗೆ ಆಕೆ ಬರೆದ ಪುಸ್ತಕವೊಂದು ೨೦೦೯ರಲ್ಲಿ ಪ್ರಕಟವಾಗಿದೆ. ನೈವ್ಸ್ ಅಂಡ್ ಏಂಜಲ್ಸ್: ವುಮೆನ್ ರೈಟರ್ಸ್ ಇನ್ ಲ್ಯಾಟಿನ್ ಅಮೇರಿಕಾ ಎಂಬುದು ಆಕೆ ಸಂಪಾದಿಸಿದ ಪ್ರಮುಖ ಕೃತಿ. ಇವಲ್ಲದೆ, ಹಲವಾರು ವಿದ್ವಾಂಸರ ಸಹಯೋಗದಲ್ಲಿ ಆಕೆ ಬರೆದ, ಸಂಪಾದಿಸಿದ ಇತರೆ ಕೃತಿಗಳು ಸಹ ಜನಪ್ರಿಯವಾಗಿವೆ.[೫]
ವಿಮರ್ಶಾತ್ಮಕ ವಿಚಾರಗಳು
[ಬದಲಾಯಿಸಿ]1998ರಲ್ಲಿ ಪ್ರಕಟವಾದ ಆಂದ್ರೆ ಲೆಫೆವರ್ ಅವರ ಜೊತೆ ಸೇರಿ ಬರೆದ ತಮ್ಮ ಕನ್‌ಸ್ಟ್ರಕ್ಟಿಂಗ್ ಕಲ್ಚರ್ಸ್: ಎಸ್ಸೇಸ್ ಆನ್ ಲಿಟರರಿ ಟ್ರಾನ್ಸ್‌ಲೇಶನ್ ಎಂಬ ಕೃತಿಯಲ್ಲಿ, “ಮೂಲಕ್ಕಿಂತ ಅನುವಾದಕ್ಕೆ ಹೆಚ್ಚು ಒತ್ತು ನೀಡುವುದರ ಕುರಿತ ‘ಪಲ್ಲಟ’ವು ಅನುವಾದಕನ ಗೋಚರತೆಯಲ್ಲಿ ಪ್ರತಿಫಲಿಸುತ್ತದೆ. ಅನುವಾದಕನು ತನ್ನನ್ನು ತಾನು ಅನುವಾದದಲ್ಲಿ ಗೋಚರವಾಗಿ ಮೂರ್ತೀಕರಿಸಬೇಕು ಎನ್ನುವ ಲಾರೆನ್ಸ್ ವೆನುಟಿ, ಅನುವಾದಕ-ಕೇಂದ್ರಿತ ಅನುವಾದವನ್ನು ಪ್ರತಿಪಾದಿಸುತ್ತಾರೆ” ಎಂದು ಬ್ಯಾಸ್ನೆಟ್ ಬರೆಯುತ್ತಾರೆ.[೬]
ಸಾಹಿತ್ಯಿಕ ತಂತ್ರವಾಗಿ ತೌಲನಿಕ ಸಾಹಿತ್ಯ
[ಬದಲಾಯಿಸಿ]2006ರಲ್ಲಿ ಪ್ರಕಟವಾದ ರಿಫ್ಲೆಕ್ಷನ್ಸ್ ಆನ್ ಕಂಪ್ಯಾರೇಟಿವ್ ಲಿಟರೇಚರ್ ಇನ್ ದ ಟ್ವೆಂಟಿ-ಫಸ್ಟ್ ಸೆಂಚುರಿ, ಎಂಬ ತಮ್ಮ ಪ್ರಬಂಧದಲ್ಲಿ, ಬ್ಯಾಸ್ನೆಟ್ ಗಾಯತ್ರಿ ಸ್ಪಿವಾಕ್ ಚಕ್ರವರ್ತಿ ತಮ್ಮ ಡೆತ್ ಆಫ್ ಎ ಡಿಸಿಪ್ಲಿನ್ (2003) ಕೃತಿಯಲ್ಲಿ ಪ್ರತಿಪಾದಿಸಿದ, ತೌಲನಿಕ ಸಾಹಿತ್ಯವು ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಯೂರೋಪಿನ ಎಲ್ಲೆಗಳನ್ನು ಮೀರಬೇಕಿದೆ ಎಂಬ ವಾದಕ್ಕೆ ದನಿಗೂಡಿಸುತ್ತಾರೆ. ಯೂರೋಸೆಂಟ್ರಿಸಂ ಪಾಶ್ಚಿಮಾತ್ಯೇತರ ಸಾಹಿತ್ಯವನ್ನು ಅಂಚಿನಲ್ಲಿಟ್ಟಿದೆ ಎಂಬ ಸ್ಪಿವಾಕ್ ಅವರ ವಾದವನ್ನು ಒಪ್ಪಿಕೊಳ್ಳುತ್ತಲೇ, ಅವರ ವಾದವು ಯುರೋಪಿನ ಸಾಹಿತ್ಯದೊಂದಿಗೆ ಚಿರಪರಿಚಿತವಾಗಿರುವ ತೌಲನಿಕವಾಗಿರುವ ತೌಲನಿಕರನ್ನು ಅತಂತ್ರ ಸ್ಥಿತಿಯಲ್ಲಿ ಇರಿಸುತ್ತದೆ ಎಂದು ಬ್ಯಾಸ್ನೆಟ್ ವಾದಿಸುತ್ತಾರೆ.
ಬ್ಯಾಸ್ನೆಟ್ ಅವರ ಪ್ರಕಾರ, ಯೂರೋಪಿನ ತೌಲನಿಕರ ಕೆಲಸವು ತಮ್ಮ ಹಿಂದಿನದನ್ನು ವಿಮರ್ಶಾತ್ಮಕವಾಗಿ ತನಿಖೆ ಮಾಡುವುದೇ ಆಗಿದೆ. ತೌಲನಿಕ ಸಾಹಿತ್ಯವು ಸಾಯುತ್ತಿರುವ ವಿಷಯವಾಗಿದ್ದು, ಅದರ ಸ್ಥಾನವನ್ನು ಅನುವಾದ ಅಧ್ಯಯನವು ನಿಧಾನವಾಗಿ ಪಡೆಯುತ್ತದೆ ಎಂಬ ತಮ್ಮ ನಿಲುವನ್ನು ಅವರು ಆ ಬಳಿಕ ಕೈಬಿಟ್ಟಿದ್ದಾರೆ. ತೌಲನಿಕ ಸಾಹಿತ್ಯ ಮತ್ತು ಅನುವಾದ ಸಿದ್ಧಾಂತಗಳೆರಡೂ ಸಾಹಿತ್ಯದ ವಿಮರ್ಶಾತ್ಮಕ ಓದಿಗೆ ಅಗತ್ಯವೆಂದು ಅವರು ಪ್ರತಿಪಾದಿಸುತ್ತಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ಥಿಯೇಟರ್ ಸ್ಟಡೀಸ್‌ನ ವಿದ್ವಾಂಸರಾಗಿದ್ದ ಕ್ಲೈವ್ ಬಾರ್ಕರ್ ಬಾಸ್ನೆಟ್‌ರ ನಿಡುಗಾಲದ ಸಂಗಾತಿಯಾಗಿದ್ದರು. ೨೦೦೫ರಲ್ಲಿ ಅವರು ನಿಧನರಾದರು.[೭]
ಉಲ್ಲೇಖಗಳು
[ಬದಲಾಯಿಸಿ]- ↑ Panda, Aditya Kumar (2016). "An Interview with Susan Bassnett". Translation Today. Vol. 10, no. II. Retrieved 17 November 2017.
- ↑ "Professor Susan Bassnett - Translation Studies - Warwick". warwick.ac.uk. Retrieved 2021-03-26.
- ↑ "Bassnett at RSL". Archived from the original on 27 September 2011. Retrieved 15 ಅಕ್ಟೋಬರ್ 2022.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ೪.೦ ೪.೧ "Bassnett, Prof. Susan Edna, (born 21 Oct. 1945), writer; Professor of Comparative Literature, University of Glasgow, since 2015; Professor of Comparative Literature, University of Warwick, 1992–2016, now Emerita (Pro-Vice-Chancellor, 1997–2003 and 2005–09)". Who's Who 2020 (in ಇಂಗ್ಲಿಷ್). Oxford University Press. 1 December 2019.
- ↑ Bassnett, Susan (September 1, 2002). Exchanging Lives: Poems and Translations. Peepal Tree Press Ltd. ISBN 978-1900715669.
- ↑ Bassnett, Susan; Lefevere, André (16 July 1998). Constructing Cultures: Essays on Literary Translation. Multilingual Matters. ISBN 9781853593529 – via Google Books.
- ↑ Baz Kershaw Obituary: Clive Barker, The Guardian, 19 April 2005