[go: up one dir, main page]

ವಿಷಯಕ್ಕೆ ಹೋಗು

ಮಿರಿಡೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಿರಿಡೀ
ರ್‍ಯಾಬ್ಡೋಮಿರಿಸ್ ಸ್ಟ್ರಯಾಟೆಲಸ್
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಆರ್ಥ್ರೊಪೋಡಾ
ವರ್ಗ: ಇನ್ಸೆಕ್ಟಾ
ಗಣ: ಹೆಮಿಪ್ಟೆರಾ
ಉಪಗಣ: ಹೆಟೆರಾಪ್ಟೆರಾ
ಮೇಲ್ಕುಟುಂಬ: ಮಿರಾಯ್ಡೀ
ಕುಟುಂಬ: ಮಿರಿಡೀ
Hahn, 1831
Type species
ಸೈಮೆಕ್ಸ್ ಸ್ಟ್ರಯಾಟಸ್ L.
ಉಪಕುಟುಂಬಗಳು
  1. ಬ್ರಾಯೊಕೋರಿನೀ Baerensprung, 1860
  2. ಸೈಲ್ಯಾಪಿನೀ Kirkaldy, 1903
  3. ಡೆರಿಯೊಕೋರಿನೀ Douglas & Scott, 1865
  4. ಐಸೊಮೆಟೋಪಿನೀ Fieber, 1860
  5. ಮಿರಿನೀ Hahn, 1833
  6. ಆರ್ತೊಟೈಲಿನೀ Van Duzee, 1916
  7. ಫ಼ೈಲಿನೀ Douglas & Scott, 1865
  8. ಸ್ಯಾಲೋಪಿನೀ Schuh, 1976
Synonyms

ಕ್ಯಾಪ್ಸಿಡೀ Burmeister, 1835

ಮಿರಿಡೀ ಎಂಬುದು ಹೆಮಿಪ್ಟರ ಗಣದ ಹೆಟರಾಪ್ಟರ ಉಪಗಣಕ್ಕೆ ಸೇರಿದ ಕೀಟ ಕುಟುಂಬ. ಉಪಗಣಕ್ಕೆ ಸೇರಿದ 43 ಕುಟುಂಬಗಳ ಪೈಕಿ ಇದೇ ಅತ್ಯಂತ ದೊಡ್ಡದಾಗಿದ್ದು ಸುಮಾರು 600 ಜಾತಿಗಳ 10,000 ಕ್ಕಿಂತ ಹೆಚ್ಚು ಪ್ರಭೇದಗಳನ್ನು ಒಳಗೊಂಡಿದೆ. ಇದನ್ನು ಕ್ಯಾಪ್ಸಿಡೀ ಎಂದು ಕೂಡ ಹೆಸರಿಸುವುದಿದೆ.[] ಇದಕ್ಕೆ ಸೇರಿದ ಕೀಟಗಳನ್ನು ಗಿಡತಿಗಣೆ ಅಥವಾ ಎಲೆ ತಿಗಣೆ ಎಂದು ಕರೆಯುವುದುಂಟು.

ಪ್ರಮುಖ ಲಕ್ಷಣಗಳು

[ಬದಲಾಯಿಸಿ]

ಮೃದುಚರ್ಮದ ದೇಹ ಅಸಿಲಸ್ ಇಲ್ಲದಿರುವುದು, ದೇಹಕ್ಕಿಂತ ದೊಡ್ಡಗಾತ್ರದ ಎಲಿಟ್ರ ರೆಕ್ಕೆಗಳು, ನಾಲ್ಕು ಖಂಡಗಳಿಂದ ರಚಿತವಾದ ಸ್ಪರ್ಶಾಂಗಗಳು, ತೆಳುವಾದ ಕಾಲುಗಳು, ನಯವಾದ ಹಾಗೂ ತ್ರಿಕೋನಾಕಾರದ ಸ್ಕುಟೆಲಮ್-ಇವು ಈ ತಿಗಣೆಗಳ ಪ್ರಮುಖ ಲಕ್ಷಣಗಳು.

ಬಹುತೇಕ ಪ್ರಭೇದಗಳು ಸಸ್ಯಾಹಾರಿಗಳು. ಬೇರೆ ಕೀಟಗಳನ್ನು ತಿಂದುಜೀವಿಸುವ ಕೆಲವು ಬಗೆಗಳೂ ಉಂಟು. ಮತ್ತೆ ಕೆಲವು ಸಸ್ಯ ಪ್ರಾಣಿಗಳೆರಡನ್ನೂ ತಿನ್ನುವಂಥವು.

ಕೆಲವು ಉಪದ್ರವಕಾರಿಗಳು

[ಬದಲಾಯಿಸಿ]

ಸಾಲ್‌ಬರ್ಜೆಲ ಸಿಂಗ್ಯುಲೇರಿಸ್ ಎಂಬುದು ಪಶ್ಚಿಮ ಆಫ್ರಿಕದ ಕೋಕೊ ಗಿಡಗಳನ್ನು ತಿಂದು ಹಾಳು ಮಾಡಿದರೆ ಕಿಯಾಂಬುರ ಕಾಫಿಯೇ ಎಂಬುದು ಪೂರ್ವ ಆಫ್ರಿಕದಲ್ಲಿ ಕಾಫಿಗಿಡಗಳಿಗೆ ಉಪದ್ರವವನ್ನುಂಟು ಮಾಡುತ್ತದೆ. ಯೂರೋಪಿನಲ್ಲಿ ಹಣ್ಣಿನ ಗಿಡಗಳ ಮೇಲೆ ಕ್ಯಾಲೋಕೋರಿಸ್ ಫಲ್ವೊಮ್ಯಾಕ್ಯುಲೇಟಸ್ ಎಂಬ ತಿಗಣೆ ವಾಸಿಸುತ್ತದೆ. ಹೆಲೊಪೆಲ್ಟಿಸ್ ಜಾತಿಯವು ಭಾರತ, ಶ್ರೀಲಂಕಾ, ಮಲೇಷ್ಯ, ಆಫ್ರಿಕಗಳಲ್ಲಿ ಕ್ವಿನೀನು ಮರಗಳನ್ನು ಪೀಡಿಸುತ್ತವೆ. ಇವುಗಳ ಪೈಕಿ ಹೆಲೊಪೆಲ್ಟಿಸ್ ತಿವೋರು ಎಂಬುದು ಅಸ್ಸಾಮಿನ ಟೀ ತೋಟಗಳಲ್ಲಿ ಹೇರಳವಾಗಿದೆ. ಟೀ ಸೊಳ್ಳೆ ಎಂದೇ ಇದನ್ನು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಮಹಾಗನಿ, ಬೇವು, ಟೀ, ಕೋಕೊ, ಸಿಂಕೋನ ಮರಗಳ ಮೇಲೆ ಹೆಲೊಪೆಲ್ಟಿಸ್ ಅಂಟೊನಿಯೈ ಎಂಬ ಹಾನಿಕಾರಕ ತಿಗಣೆ ಕಂಡುಬರುತ್ತದೆ. ಅಂತೆಯೇ ಡಿಸ್‌ಫಿಂಕ್ಟಸ್ ಪಾಲಿಟನ್ ಎಂಬುದು ವೀಳೆಯದೆಲೆ ಬಳ್ಳಿಗಳ ಮೇಲೂ, ಕ್ಯಾಲೊಕೋರಿಸ್ ಆಂಗುಸ್ಟೇಟಸ್ ಜೋಳ ಮತ್ತು ಮುಸುಕಿನ ಜೋಳಗಳ ಮೇಲೂ, ಗ್ಯಾಲೊಬೆಲಿಕಸ್ ಕ್ರಾಸಿಯೊಕೋರಿಸ್ ತಂಬಾಕು ಗಿಡಗಳ ಮೇಲೂ ಜೀವಿಸಿ ಬೆಳೆಯನ್ನು ಹಾಳುಮಾಡುವುವು.

ಪರಭಕ್ಷಿ ಕೀಟಗಳು

[ಬದಲಾಯಿಸಿ]

ಮಿರಿಡೀ ಕುಟುಂಬದ ಪರಭಕ್ಷಿ ತಿಗಣೆಗಳ ಪೈಕಿ ಯೂರೋಪಿನ ಡೆರಿಯೊಕೋರಿಸ್ ರೂಬರ್ ಎಂಬುದು ಏಫಿಡ್ ಕೀಟಗಳನ್ನು ತಿಂದು ಅವನ್ನು ನಿಯಂತ್ರಿಸುತ್ತದೆ. ಸಿರ್ಟೊರೈನಸ್ ಮುಂಡಲಸ್ ಕಬ್ಬಿನ ಬೆಳೆಗೆ ಬೀಳುವ ಮಿಡತೆಗಳನ್ನು ತಿಂದು ಉಪಕಾರವೆಸಗುತ್ತದೆ. ಅಂತೆಯೇ ಮ್ಯಾಲಗ್ಯಾಸೀ ದ್ವೀಪದಲ್ಲಿ ಕಾಣದೊರೆಯುವ ಲಿಸೊಕ್ಯಾಪ್ಸಸ್ ವಾಸ್‌ಮ್ಯಾನಿಯೈ ಎಂಬುದು ಕ್ರೆಮಟೋಗ್ಯಾಸ್ಟರ್ ಕೀಟಗಳನ್ನು ತಿಂದು ಜೀವಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Henry, T. J. and A. G. Wheeler, Jr., 1988A. Family Miridae Hahn, 1833 (= Capsidae Burmeister, 1835). The plant bugs, pp. 251--507. In: Henry, T. J. and R. C. Froeschner (eds.), Catalog of the Heteroptera, or True Bugs of Canada and the Continental United States. E. J. Brill, Leiden.

ಹೆಚ್ಚಿನ ಓದಿಗೆ

[ಬದಲಾಯಿಸಿ]
  • Cassis, G.; Schuh, R. T. (2012). "Systematics, Biodiversity, Biogeography, and Host Associations of the Miridae (Insecta: Hemiptera: Heteroptera: Cimicomorpha)". Annual Review of Entomology. 57: 377–404. doi:10.1146/annurev-ento-121510-133533. PMID 22149267.
  • Wheeler, Alfred George Jr. (2001). Biology of the plant bugs (Hemiptera: Miridae), pests, predators, opportunists. Ithaca, New York: Cornell University Press. ISBN 978-0-8014-3827-1. Google books preview

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮಿರಿಡೀ&oldid=1198457" ಇಂದ ಪಡೆಯಲ್ಪಟ್ಟಿದೆ