[go: up one dir, main page]

ವಿಷಯಕ್ಕೆ ಹೋಗು

ಗುಮಾಸ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುಮಾಸ್ತನು ಸಾಮಾನ್ಯ ಕಚೇರಿ ಕಾರ್ಯಗಳನ್ನು ಮಾಡುವ ಬಿಳಿ ಕೊರಳಪಟ್ಟಿಯ ಕೆಲಸಗಾರ, ಅಥವಾ ಚಿಲ್ಲರೆ ಮಾರಾಟದ ಪರಿಸರದಲ್ಲಿ (ಮಾರಾಟ ಗುಮಾಸ್ತ) ಹೋಲುವ ಮಾರಾಟ ಸಂಬಂಧಿ ಕಾರ್ಯಗಳನ್ನು ಮಾಡುವ ಕೆಲಸಗಾರ. ಗುಮಾಸ್ತ ಕಾರ್ಮಿಕರ ಜವಾಬ್ದಾರಿಗಳಲ್ಲಿ ಸಾಮಾನ್ಯವಾಗಿ ದಾಖಲೆಗಳ ನಿರ್ವಹಣೆ, ಕಡತಗಳ ನಿರ್ವಹಣೆ, ಸೇವಾ ಮುಂಗಟ್ಟುಗಳಲ್ಲಿ ಕೂಡುವುದು, ಕೋರುಗರನ್ನು ಪರೀಕ್ಷಿಸುವುದು, ಮತ್ತು ಇತರ ಆಡಳಿತ ಕಾರ್ಯಗಳು ಸೇರಿವೆ.

ಅಮೇರಿಕದಲ್ಲಿ ಗುಮಾಸ್ತ ಕಾರ್ಮಿಕರು ಬಹುಶಃ ಅತಿ ದೊಡ್ಡ ಉದ್ಯೋಗಿ ಗುಂಪಾಗಿದೆ. ೨೦೦೪ರಲ್ಲಿ, ೩.೧ ಮಿಲಿಯ ಸಾಮಾನ್ಯ ಕಚೇರಿ ಗುಮಾಸ್ತರು, ೧.೫ ಮಿಲಿಯ ಕಚೇರಿ ಆಡಳಿತ ಮೇಲ್ವಿಚಾರಕರು ಮತ್ತು ೪.೧ ಮಿಲಿಯ ಕಾರ್ಯದರ್ಶಿಗಳಿದ್ದರು.[] ಹಲವುವೇಳೆ ಗುಮಾಸ್ತ ವೃತ್ತಿಗಳಿಗೆ ಕಾಲೇಜು ಪದವಿ ಬೇಕಾಗಿರುವುದಿಲ್ಲ, ಆದರೂ ಸ್ವಲ್ಪ ಕಾಲೇಜು ಶಿಕ್ಷಣ ಅಥವಾ ವೃತ್ತಿಪರ ಕಾರ್ಯಕ್ರಮಗಳಲ್ಲಿ ೧ ರಿಂದ ೨ ವರ್ಷಗಳು ಸಾಮಾನ್ಯ ಅರ್ಹತೆಗಳಾಗಿರುತ್ತವೆ. ಕಚೇರಿ ಉಪಕರಣಗಳು ಮತ್ತು ಕೆಲವು ತಂತ್ರಾಂಶ ಕ್ರಮವಿಧಿಗಳ ಪರಿಚಿತತೆಯು ಕೂಡ ಹಲವುವೇಳೆ ಅಗತ್ಯವಿರುತ್ತದೆ. ಉದ್ಯೋಗದಾತರು ಗುಮಾಸ್ತರಿಗೆ ತರಬೇತಿಯನ್ನು ಒದಗಿಸಬಹುದು. ಗುಮಾಸ್ತರ ಸರಾಸರಿ ಸಂಬಳವು ೨೩,೦೦೦ ಡಾಲರ್‌ಗಳಷ್ಟಿದೆ, ಮತ್ತು ೨೫ ಅಥವಾ ಹೆಚ್ಚಿನ ವಯಸ್ಸಿನ ಕಾರ್ಮಿಕರ ರಾಷ್ಟ್ರೀಯ ಸರಾಸರಿ ಆದಾಯವು ೩೩,೦೦೦ ಡಾಲರ್ ಆಗಿದೆ. ಸರಾಸರಿ ಸಂಬಳಗಳು ಸಾಮಾನ್ಯ ಕಚೇರಿ ಗುಮಾಸ್ತರಿಗೆ ೨೨,೭೭೦ ಡಾಲರ್‌ನಿಂದ ಹಿಡಿದು ಕಾರ್ಯದರ್ಶಿಗಳಿಗೆ ೩೪,೯೭೦ ಡಾಲರ್‌ಗಳು ಮತ್ತು ಆಡಳಿತ ಮೇಲ್ವಿಚಾರಕರಿಗೆ ೪೧,೦೩೦ ಡಾಲರ್‌ಗಳವರೆಗಿವೆ. ಥಾಂಪ್ಸನ್, ಹಿಕಿ ಅಥವಾ ಹೆನ್‍ಸ್ಲಿನ್‍ನಂತಹ ಅಮೇರಿಕದ ಸಮಾಜಶಾಸ್ತ್ರಜ್ಞರು ಗುಮಾಸ್ತ ಕಾರ್ಮಿಕರನ್ನು ಶ್ರಮಿಕ ವರ್ಗವೆಂದು ಪರಿಗಣಿಸುತ್ತಾರೆ, ಏಕೆಂದರೆ ಅವರು ತುಲನಾತ್ಮಕವಾಗಿ ಕಡಿಮೆ ಸ್ವಾಯತ್ತತೆಯಿರುವ ಬಹಳ ನಿಯತವಾದ ಕಾರ್ಯಗಳನ್ನು ಮಾಡುತ್ತಾರೆ. ಬಿಳಿ ಮತ್ತು ನೀಲಿ ಕೊರಳಪಟ್ಟಿ ವಿಭಜನೆಯು ಕೆಲವು ಅರೆ ವೃತ್ತಿಪರರು ಸೇರಿದಂತೆ ವೃತ್ತಿಪರರು, ಮತ್ತು ವಾಡಿಕೆ ಕೆಲಸ ಮಾಡುವ ಬಿಳಿ ಕೊರಳಪಟ್ಟಿಯ ಕೆಲಸಗಾರರ ನಡುವಿನ ವಿಭಜನೆಗೆ ಸ್ಥಳಾಂತರಗೊಂಡಿದೆ ಎಂದು ಸಮಾಜಶಾಸ್ತ್ರಜ್ಞ ಗಿಲ್ಬರ್ಟ್ ವಾದಿಸುತ್ತಾರೆ. ಬಿಳಿ ಕೊರಳಪಟ್ಟಿಯ ಕಚೇರಿ ಮೇಲ್ವಿಚಾರಕರನ್ನು ಕೆಳ ಮಧ್ಯಮ ವರ್ಗವೆಂದು ಪರಿಗಣಿಸಬಹುದು, ಮತ್ತು ಕೆಲವು ಕಾರ್ಯದರ್ಶಿಗಳು ಶ್ರಮಿಕ ಹಾಗೂ ಮಧ್ಯಮ ವರ್ಗಗಳು ಸಮಾಜಾರ್ಥಿಕ ಸ್ತರದ ಪರಸ್ಪರ ಅತಿಕ್ರಮಿಸುವ ಭಾಗದಲ್ಲಿ ಇರುವರು.

ಸಾಂಪ್ರದಾಯಿಕವಾಗಿ ಗುಮಾಸ್ತ ಹುದ್ದೆಗಳನ್ನು ಬಹುತೇಕ ವಿಶಿಷ್ಟವಾಗಿ ಮಹಿಳೆಯರು ಹೊಂದಿದ್ದಾರೆ. ಇಂದು ಕೂಡ, ಅಮೇರಿಕದಲ್ಲಿ ಬಹುತೇಕ ಎಲ್ಲ ಗುಮಾಸ್ತ ಕಾರ್ಮಿಕರು ಮಹಿಳೆಯರು ಆಗಿರುವುದು ಮುಂದುವರೆದಿದೆ. ಇತರ ಪ್ರಧಾನವಾಗಿ ಹೆಂಗಸರ ಹುದ್ದೆಗಳಂತೆ, ಗುಮಾಸ್ತ ವೃತ್ತಿಗಳಿಗೆ (ಸ್ವಲ್ಪ ಮಟ್ಟಿಗೆ ಈಗೂ ಕೂಡ ಮುಂದುವರಿದಿದೆ) ಲಿಂಗಭೇದಭಾವದ ಆಧಾರದ ಮೇಲೆ ತುಲನಾತ್ಮಕವಾಗಿ ಕಡಿಮೆ ಪ್ರತಿಷ್ಠೆಯನ್ನು ನೀಡಲಾಗುತ್ತದೆ. ಪ್ರಧಾನವಾಗಿ ಹೆಂಗಸರ ಬಿಳಿ ಕೊರಳಪಟ್ಟಿಯ ಹುದ್ದೆಗಳನ್ನು ವರ್ಣಿಸಲು ಹಲವುವೇಳೆ ನಸುಗೆಂಪು ಕೊರಳಪಟ್ಟಿ ಕಾರ್ಮಿಕ ಪದವನ್ನು ಬಳಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "US Department of Labor, General office clerks". Archived from the original on 2012-01-29. Retrieved 2007-06-07.
"https://kn.wikipedia.org/w/index.php?title=ಗುಮಾಸ್ತ&oldid=1128711" ಇಂದ ಪಡೆಯಲ್ಪಟ್ಟಿದೆ