ನಿಯಾನ್
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ನಿಯಾನ್, Ne, ೧೦ | ||||||||||||||
ರಾಸಾಯನಿಕ ಸರಣಿ | noble gases | ||||||||||||||
ಗುಂಪು, ಆವರ್ತ, ಖಂಡ | 18, 2, p | ||||||||||||||
ಸ್ವರೂಪ | colorless | ||||||||||||||
ಅಣುವಿನ ತೂಕ | 20.1797(6) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | 1s2 2s2 2p6 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8 | ||||||||||||||
ಭೌತಿಕ ಗುಣಗಳು | |||||||||||||||
ಬಣ್ಣ | 164 | ||||||||||||||
ಹಂತ | gas | ||||||||||||||
ಸಾಂದ್ರತೆ | (0 °C, 101.325 kPa) 0.9002 g/L | ||||||||||||||
ಕರಗುವ ತಾಪಮಾನ | 24.56 K (-248.59 °C, -415.46 °ಎಫ್) | ||||||||||||||
ಕುದಿಯುವ ತಾಪಮಾನ | 27.07 K (-246.08 °C, -410.94 °F) | ||||||||||||||
ತ್ರಿಗುಣ ಬಿಂದು | 24.5561 K, 43[೧][೨] kPa | ||||||||||||||
ಕ್ರಾಂತಿಬಿಂದು | 44.4 K, 2.76 MPa | ||||||||||||||
ಸಮ್ಮಿಲನದ ಉಷ್ಣಾಂಶ | 0.335 kJ·mol−1 | ||||||||||||||
ಸಮ್ಮಿಲನದ ಉಷ್ಣಾಂಶ | 98798 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 1.71 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 20.786 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | cubic face centered | ||||||||||||||
ಆಕ್ಸಿಡೀಕರಣ ಸ್ಥಿತಿಗಳು | no data | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 38 pm | ||||||||||||||
ತ್ರಿಜ್ಯ ಸಹಾಂಕ | 69 pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 154 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | nonmagnetic | ||||||||||||||
ಉಷ್ಣ ವಾಹಕತೆ | (300 K) 49.1x10-3 W·m−1·K−1 | ||||||||||||||
ಶಬ್ದದ ವೇಗ | (gas, 0 °C) 435 m/s | ||||||||||||||
ಸಗಟು ಮಾಪನಾಂಕ | 654654 GPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-01-9 | ||||||||||||||
ಉಲ್ಲೇಖನೆಗಳು | |||||||||||||||
ನಿಯಾನ್ ಒಂದು ಬಣ್ಣರಹಿತ ಅನಿಲ ಮೂಲಧಾತು. ಬ್ರಹ್ಮಾಂಡದಲ್ಲಿ ಬಹಳ ವಿಪುಲವಾಗಿ ದೊರೆಯುವ ಈ ಅನಿಲ ಭೂಮಿಯಲ್ಲಿ ಅಷ್ಟೇ ವಿರಳ. ಇದನ್ನು ೧೮೯೮ರಲ್ಲಿ ಸ್ಕಾಟ್ಲಾಂಡ್‌ನ ವಿಲಿಯಮ್ ರಾಮ್ಸೆ ಮತ್ತು ಇಂಗ್ಲೆಂಡ್‌ನ ಮೊರಿಸ್ ಟ್ರೆವರ್ಸ್ ಕಂಡುಹಿಡಿದರು. ಇದರ ಹೆಸರು ಗ್ರೀಕ್ ಭಾಷೆಯಲ್ಲಿ "ಹೊಸದು" ಎಂಬ ಪದದಿಂದ ಬಂದಿದೆ. ಇದನ್ನು ಪ್ರಮುಖವಾಗಿ ಪ್ರಕಾಶಮಾನವಾದ ನಿಯಾನ್ ದೀಪಗಳಲ್ಲಿ ಉಪಯೋಗಿಸಲಾಗುತ್ತದೆ.
ವರ್ಗೀಕರಣ
[ಬದಲಾಯಿಸಿ]ನಿಯಾನ್ - ಆವರ್ತಕೋಷ್ಟಕದಲ್ಲಿ ಸೊನ್ನೆ ಗುಂಪಿಗೆ ಸೇರಿದ ಅನಿಲಧಾತು. ರಾಸಾಯನಿಕ ಪ್ರತೀಕ Ne. ಹೀಲಿಯಮ್, ನಿಯಾನ್, ಕ್ರಿಪ್ಟಾನ್, ಗ್ಝಿನಾನ್, ಆರ್ಗಾನ್ ಮತ್ತು ರೇಡಾನ್ ಇವನ್ನೊಳಗೊಂಡ ವಿರಳ ಅಥವಾ ನಿಷ್ಕ್ರಿಯ ಅನಿಲಗಳ ಕುಟುಂಬದ ಸದಸ್ಯ. ಆಂಗ್ಲ ರಸಾಯನವಿಜ್ಞಾನಿಗಳಾದ ಸರ್ ವಿಲಿಯಮ್ ರ್ಯಾಮ್ಸೆ ಮತ್ತು ಎಂ. ಡಬ್ಲ್ಯು. ಟ್ರ್ಯಾವರ್ಸ್ ಎಂಬವರು ಅಶುದ್ಧವಾದ ಅರ್ಗಾನ್ ಅನಿಲದ ದ್ರವವನ್ನು ಆಂಶಿಕ ಆಸವನ ಮಾಡುತ್ತಿದ್ದಾಗ ಹೊಸತೊಂದು ಅನಿಲವನ್ನು ಶೋಧಿಸಿದರು (1898). ಅದನ್ನು ವಿದ್ಯುತ್ತಿನಿಂದ ಉದ್ರೇಕಿಸಿದಾಗ ಕಿತ್ತಳೆಮಿಶ್ರಿತ ಕೆಂಪುಬಣ್ಣದ ಉಜ್ಜ್ವಲ ಪ್ರಕಾಶ ಹೊಮ್ಮಿದ್ದು ಕಂಡುಬಂದಿತು. ಆಗಲೆ ಇದೊಂದು ಹೊಸ ಧಾತು ಇರಬೇಕು ಎಂದು ಗುರುತಿಸಿ ಇದನ್ನು ನಿಯಾನ್ (ಹೊಸತು ಎಂಬರ್ಥ) ಎಂಬುದಾಗಿ ನಾಮಕರಿಸಲಾಯಿತು. ನಿಯಾನ್ ಅನಿಲ ಸೃಷ್ಟಿಯಲ್ಲಿ ವಿಶಾಲವಾಗಿ ಆದರೆ ಅತ್ಯಲ್ಪ ಮೊತ್ತದಲ್ಲಿ ಹರಡಿಹೋಗಿದೆ. ಇದು ವಾಯು ಮಂಡಲದಲ್ಲಿದೆ. ಭೂಮಿಯಲ್ಲಿಯ ಕಲ್ಲುಬಂಡೆಗಳಲ್ಲಿ ಸಿಕ್ಕಿಕೊಂಡು ಕೂಡ ಇದೆ. ಒಣವಾಯುವಿನಿಂದ ಗಾತ್ರರೀತ್ಯ 0.0018% ಪ್ರಮಾಣದಲ್ಲಿಯೂ ಭೂಮಿಯಲ್ಲಿ ತೂಕರೀತ್ಯ 5(10-7% ಪ್ರಮಾಣದಲ್ಲಿಯೂ ಇರುವುದು.
ರಾಸಾಯನಿಕ ಲಕ್ಷಣಗಳು
[ಬದಲಾಯಿಸಿ]ದ್ರವವಾಯುವನ್ನು ಆಂಶಿಕವಾಗಿ ಆಸವಿಸಿ ನಿಯಾನನ್ನು ತಯಾರಿಸುತ್ತಾರೆ. ಆಂಶಿಕಾಸವನದಲ್ಲಿ ದೊರೆಯುವ ಅತಿ ಆವಿಶೀಲ ಘಟಕದಲ್ಲಿ ಹೀಲಿಯಮ್, ನಿಯಾನ್ ಮತ್ತು ನೈಟ್ರೊಜನ್ನುಗಳು ಇರುತ್ತವೆ. ಈ ಮಿಶ್ರಣದಲ್ಲಿದ್ದ ಹೀಲಿಯಮ್ ಮತ್ತು ನೈಟ್ರೊಜನ್ನುಗಳನ್ನು ಅಧಿಕ ಒತ್ತಡ ಮತ್ತು ಕಡಿಮೆ ಉಷ್ಣತೆಯಲ್ಲಿ ಚುರುಕಾದ ಇದ್ದಲಿನ ಮೇಲೆ ಐಚ್ಛಿಕ ಅಧಿಶೋಷಣೆ ಮಾಡುವುದರಿಂದ ಬೇರ್ಪಡಿಸಿ ನಿಯಾನನ್ನು ಶೇಖರಿಸಲಾಗುತ್ತದೆ. ನಿಯಾನ್ ಅನಿಲಕ್ಕೆ ಬಣ್ಣ ವಾಸನೆ ಮತ್ತು ರುಚಿ ಇಲ್ಲ. ಇದು ವಾಯುವಿಗಿಂತ ಹಗುರ. ಇದರ ಪರಮಾಣು ಸಂಖ್ಯೆ 10. ಪರಮಾಣುತೂಕ 20.183. ವೇಲೆನ್ಸಿ 0. ಸಾಂದ್ರತೆ (1 ಪರಮಾಣು, 0ºಅ) 0.8999 ಗ್ರಾಮ್/ಲೀಟರ್. ಕ್ವಥನಬಿಂದು-246.0480ಅ, ದ್ರವನಬಿಂದು -248.670ಅ ಎಲೆಕ್ಟ್ರಾನ್ ಜೋಡಣೆ . ನಿಯಾನ್ ಯಾವ ತರಹದ ರಾಸಾಯನಿಕ ಸಂಯುಕ್ತಗಳನ್ನೂ ಕೊಡುವುದಿಲ್ಲ.
ಉಪಯೋಗಗಳು
[ಬದಲಾಯಿಸಿ]ನಿಯಾನ್ ಅನಿಲವನ್ನು ಅತಿ ಮುಖ್ಯವಾಗಿ ಪ್ರದರ್ಶನ ಹಾಗೂ ಪ್ರಚಾರಕ್ಕಾಗಿ ಬೇಕಾಗುವ ನಿಯಾನ್ ಗುರುತುಗಳನ್ನು ಮಾಡಲಿಕ್ಕೆ ಬಳಸುತ್ತಾರೆ. ನಿಯಾನ್ ಗುರುತುಗಳೆಂದರೆ ನಿಯಾನ್, ಆರ್ಗಾನ್ ಮತ್ತು ಹೀಲಿಯಮ್ ಅನಿಲಗಳಿಂದಾಗಲಿ ಅವುಗಳ ಮಿಶ್ರಣದಿಂದಾಗಲಿ ತುಂಬಿದ ಅಧಿಕ ವೋಲ್ಟೇಜಿನ ವಿದ್ಯುತ್ ವಿಸರ್ಜಕ ಗಾಜಿನ ಕೊಳವೆಗಳು. ಕೆಲವು ಸಲ ಈ ಕೊಳವೆಗಳಲ್ಲಿ ಪಾದರಸದ ಹಬೆಯನ್ನು ತುಂಬುವುದೂ ಉಂಟು. ಆದರೆ ಗಾಜಿನ ಕೊಳವೆಯ ಬಣ್ಣ ಹಾಗೂ ಅದರಲ್ಲಿ ತುಂಬಿದ ಅನಿಲವನ್ನು ನಿಯಾನ್ ಗುರುತಿನ ಬಣ್ಣ ಅವಲಂಬಿಸಿರುತ್ತದೆ. ವರ್ಣರಹಿತ ಗಾಜಿನ ಕೊಳವೆಯಲ್ಲಿ ನಿಯಾನ್ ಅನಿಲ ಕೆಂಪುಬಣ್ಣದ ಹೊಳಪನ್ನು ಕೊಟ್ಟರೆ ಹಳದಿ ಬಣ್ಣದ ಗಾಜಿನ ಕೊಳವೆಯಲ್ಲಿ ಅದೇ ಹೊಳಪು ಕಿತ್ತಳೆಬಣ್ಣದ ಹೊಳಪಾಗಿ ಕಾಣಿಸುತ್ತದೆ. ಅದರಂತೆಯೆ ಹೀಲಿಯಮ್, ಆರ್ಗಾನ್ ಮತ್ತು ನಿಯಾನ್ ಅನಿಲಗಳ ಮಿಶ್ರಣ ವರ್ಣರಹಿತ ಗಾಜಿನ ಕೊಳವೆಯಲ್ಲಿ ನೀಲಿಬಣ್ಣದ ಹೊಳಪನ್ನು ಕೊಟ್ಟರೆ ಅದೇ ಹೊಳಪು ಹಳದಿ ಬಣ್ಣದ ಗಾಜಿನ ಕೊಳವೆಯಲ್ಲಿ ಹಸಿರು ಬಣ್ಣದ ಹೊಳಪಾಗಿ ಕಾಣಿಸುತ್ತದೆ. ಅಧಿಕ ವೋಲ್ಟೇಜನ್ನು ಅಳೆಯುವ ಸಾಧನಗಳನ್ನು ಮಾಡಲು ನಿಯಾನ್ ಅನಿಲವನ್ನು ಉಪಯೋಗಿಸುತ್ತಾರೆ. ಅಲ್ಲದೆ ಹೈಡ್ರೋಜನ್ನಿಗಿಂತ ನಿಯಾನ್ ಬೆಲೆಯುಳ್ಳದ್ದಾದರೂ ಹೈಡ್ರೊಜನ್ನಿನಂತೆ ಜ್ವಲನಶೀಲವಲ್ಲವಾದ್ದರಿಂದ ಇದನ್ನು ಅತಿಶೀತಕಾರಕ ದ್ರವ ಎಂದು ಬಳಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ Preston-Thomas, H. (1990). "The International Temperature Scale of 1990 (ITS-90)". Metrologia. 27: 3–10.
- ↑ "Section 4, Properties of the Elements and Inorganic Compounds; Melting, boiling, triple, and critical temperatures of the elements". CRC Handbook of Chemistry and Physics (85th edition ed.). Boca Raton, Florida: CRC Press. 2005.
{{cite book}}
:|edition=
has extra text (help)
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Neon at The Periodic Table of Videos (University of Nottingham)
- WebElements.com – Neon.
- It's Elemental – Neon
- USGS Periodic Table – Neon
- Atomic Spectrum of Neon
- Neon Museum, Las Vegas